ಪರಿಷ್ಕರಿಸಲಾದ ಹೊಸ ತಾತ್ಕಾಲಿಕ ವೇಳಾಪಟ್ಟಿ |
2024-25ನೇ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರನ್ನು ಆನ್‌ಲೈನ್ ಕೌನ್ಸಿಲಿಂಗ್ ಪ್ರಕ್ರಿಯೆ ಮೂಲಕ ಆಯ್ಕೆ ಮಾಡಿಕೊಳ್ಳಲು ಪ್ರಾರಂಭಿಸಲಾಗಿದೆ.
2024-25ನೇ ಶೈಕ್ಷಣಿಕ ಸಾಲಿಗೆ ಅತಿಥಿ ಉಪನ್ಯಾಸಕರನ್ನು ಕರ್ನಾಟಕ ಸರಕಾರ ಆಯ್ಕೆ ಮಾಡಿಕೊಳ್ಳುತ್ತಿದ್ದು ಈ ಕುರಿತು ನಿಮಗೆ ಅವಶ್ಯವಿರುವಂತಹ ಎಲ್ಲ ಮಾಹಿತಿಯನ್ನು ನಿಮಗೆ ನೀಡಲು ಪ್ರಯತ್ನಿಸುತ್ತೇವೆ. ಇದರ ಕೆಳಗೆ ಅರ್ಜಿಸಲ್ಲಿಸುವ ಲಿಂಕನ್ನು ನೀಡಲಾಗಿದೆ. ಹಾಗೂ ಪೂರ್ಣ ಮಾಹಿತಿಯನ್ನೊಳಗೊಂಡ Notification Link ನ್ನು ನೀಡಲಾಗಿದೆ.
- ಅತಿಥಿ ಉಪನ್ಯಾಸಕರ ಸೇವೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 01 ವಿಷಯಕ್ಕೆ ಒಂದೇ ಅರ್ಜಿಯನ್ನು ಮಾತ್ರ ಸಲ್ಲಿಸುವುದು. ಒಂದೇ ವಿಷಯಕ್ಕೆ ಒಂದಕ್ಕಿಂತ ಹೆಚ್ಚಿನ ಅರ್ಜಿಗಳನ್ನು ಅಂದರೆ 2 , 3 , 4 ಅಥವಾ ಅದಕ್ಕಿಂತ ಹೆಚ್ಚಿಗೆ ಅರ್ಜಿ ಸಲ್ಲಿಸಿದಲ್ಲಿ ಅಂತಹ ಅಭ್ಯರ್ಥಿಗಳ ಅರ್ಜಿಗಳನ್ನು ಆಯ್ಕೆಗೆ ಪರಿಗಣಿಸಲಾಗುವುದಿಲ್ಲ.
ಮೊದಲಿನ (ಈ ಹಿಂದಿನ)ತಾತ್ಕಾಲಿಕ ವೇಳಾಪಟ್ಟಿಯ ಮಾಹಿತಿ
ಕ್ರ. ಸಂ | ಮಾಹಿತಿಯ ವಿವರ | ದಿನಾಂಕ |
01 | ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭವಾಗಿರುವ ದಿನಾಂಕ | 30-08-2024 |
02 | ಅರ್ಜಿ ಸಲ್ಲಿಸಲು ನಿಗದಿ ಪಡಿಸಿದ ಕೊನೆಯ ದಿನಾಂಕ | 07-09-2024 |
03 | ತಾತ್ಕಾಲಿಕವಾಗಿ ಮೆರಿಟ್ ಪಟ್ಟಿ ಪ್ರಕಟಣೆ ಮಾಡುವ ದಿನಾಂಕ | 08-09-2024 |
04 | ಈಗಾಗಲೆ ಈ ವರ್ಷ ಸಲ್ಲಿಸಿರುವ ಅರ್ಜಿಯಲ್ಲಿ ಲೋಪದೋಷಗಳಾಗಿದ್ದರೆ ಅವುಗಳನ್ನು ಸರಿಪಡಿಸಿ ತಿದ್ದುಪಡೆ ಮಾಡಲು ಅವಕಾಶ ಕೊಟ್ಟ ದಿನಾಂಕ | 9th and 10th Sept 2024 |
05 | ಕಾರ್ಯಭಾರ ಪ್ರಕಟಿಸುವ ದಿನಾಂಕ | 11-09-2024 |
06 | ಮೆರಿಟ್ ಪಟ್ಟಿಗೆ ಅನುಗುಣವಾಗಿ ಕಾಲೇಜುಗಳನ್ನು ಆಯ್ಕೆಮಾಡಿಕೊಳ್ಳಲು ಕೌನ್ಸಿಲಿಂಗ್ ನಡೆಸುವ ದಿನಾಂಕಗಳು | 17-09-2024 |
ಅರ್ಹತೆ :
ಕ್ರ. ಸಂ | ವಿದ್ಯಾರ್ಹತೆ | ಅಂಕಗಳು |
01 | ಸ್ನಾತಕೋತ್ತರ ಪದವಿಯಲ್ಲಿಅಭ್ಯರ್ಥಿಯು ಎರಡು ವರ್ಷದಲ್ಲಿ ಗಳಿಸಿರುವ ಒಟ್ಟು ಶೇಕಡಾವಾರು ಅಂಕಗಳ 25%ನ್ನು ಗಣನೆಗೆ ತೆಗೆದುಕೊಳ್ಳಲಾಗುವುದು. | 25 |
02 | ಹೆಚ್ಚುವರಿ ವಿದ್ಯಾರ್ಹತೆ : | |
1) ಪಿಹೆಚ್.ಡಿ ವಿದ್ಯಾರ್ಹತೆಯನ್ನು ಪಡೆದಿದ್ದರೆ | 12 | |
2) ಎನ್‌ಇಟಿ/ಕೆ-ಸೆಟ್/ಎಸ್ಎಲ್‌ಇಟಿ ಇವುಗಳಲ್ಲಿ ಅರ್ಹತೆಯನ್ನು ಹೊಂದಿದ್ದರೆ | 09 | |
3) ಎಂ.ಫಿಲ್. ವಿದ್ಯಾರ್ಹತೆಯನ್ನು ಪಡೆದಿದ್ದರೆ | 06 | |
03 | ಅನುಭವ: | |
ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಅವಧಿಗೆ ಪ್ರತಿ ಶೈಕ್ಷಣಿಕ ವರ್ಷಕ್ಕೆ 3 ಅಂಕಗಳಂತೆ ಗರಿಷ್ಠ 16 ವರ್ಷಗಳಿಗೆ 48 ಅಂಕಗಳು | 48 | |
ಒಟ್ಟು | 100 | |
ಅರ್ಹರಾಗಿರುವ ವಿಕಲಚೇತನ ಅಭ್ಯರ್ಥಿಗಳಿಗೆ ಹೆಚ್ಚುವರಿಯಾಗಿ 10 ಅಂಕಗಳನ್ನು ನೀಡಲಾಗುವುದೆಂದು ತಿಳಿಸಿದ್ದಾರೆ. |
ವಿದ್ಯಾರ್ಹತೆ/ಸೇವಾ ಅವಧಿಗೆ ಅನುಗುಣವಾಗಿ ಗೌರವ ಧನವನ್ನು ನಿಯಮಾನುಸಾರ ಪರಿಗಣಿಸಲಾಗುವುದು
ಕ್ರ. ಸಂ |
ಸೇವಾವಧಿ ಮತ್ತು ವಿದ್ಯಾರ್ಹತೆ |
ಗೌರವ ಧನ |
01 | 5 ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿರುವ ಹಾಗೂ ಯುಜಿಸಿ ನಿಗಧಿಪಡಿಸಿದ ವಿದ್ಯಾರ್ಹತೆ ಹೊಂದಿರುವವರಿಗೆ | 35,000/- |
02 | 5 ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿರುವ ಹಾಗೂ ಯುಜಿಸಿ ನಿಗಧಿಪಡಿಸಿದ ವಿದ್ಯಾರ್ಹತೆ ಹೊಂದಿಲ್ಲದವರಿಗೆ | 31,000/- |
03 | 5 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ಮತ್ತು 10 ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿರುವ ಹಾಗೂ ಯುಜಿಸಿ ನಿಗಧಿಪಡಿಸಿದ ವಿದ್ಯಾರ್ಹತೆ ಹೊಂದಿರುವವರಿಗೆ | 38,000/- |
04 | 5 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ಮತ್ತು 10 ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿರುವ ಹಾಗೂ ಯುಜಿಸಿ ನಿಗಧಿಪಡಿಸಿದ ವಿದ್ಯಾರ್ಹತೆ ಹೊಂದಿಲ್ಲದವರಿಗೆ | 34,000/- |
05 | 10 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ಮತ್ತು 15 ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿರುವ ಹಾಗೂ ಯುಜಿಸಿ ನಿಗಧಿಪಡಿಸಿದ ವಿದ್ಯಾರ್ಹತೆ ಹೊಂದಿರುವವರಿಗೆ | 39,000/- |
06 | 10 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ಮತ್ತು 15 ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿರುವ ಹಾಗೂ ಯುಜಿಸಿ ನಿಗಧಿಪಡಿಸಿದ ವಿದ್ಯಾರ್ಹತೆ ಹೊಂದಿರುವವರಿಗೆ ಹೊಂದಿಲ್ಲದವರಿಗೆ | 35,000/- |
07 | 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಸೇವೆ ಸಲ್ಲಿಸಿರುವ ಹಾಗೂ ಯುಜಿಸಿ ನಿಗಧಿಪಡಿಸಿದ ವಿದ್ಯಾರ್ಹತೆ ಹೊಂದಿರುವವರಿಗೆ | 40,000/- |
08 | 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಸೇವೆ ಸಲ್ಲಿಸಿರುವ ಹಾಗೂ ಯುಜಿಸಿ ನಿಗಧಿಪಡಿಸಿದ ವಿದ್ಯಾರ್ಹತೆ ಹೊಂದಿಲ್ಲದವರಿಗೆ | 36,000/- |
Apply Online: ಅತಿಥಿ ಉಪನ್ಯಾಸಕರ ಸೇವೆಗೆ ಅರ್ಜಿ ಸಲ್ಲಿಸಲು ಕ್ಲಿಕ್ ಮಾಡಿ
Notification: ಅತಿಥಿ ಉಪನ್ಯಾಸಕರ ಸರಕಾರಿ ಪ್ರಕಟಣೆಗೆ ಕ್ಲಿಕ್ ಮಾಡಿ
Official Website: ಇಲಾಖಾ ಜಾಲತಾಣ
ಹೆಚ್ಚಿನ ಮಾಹಿತಿಗಾಗಿ ಇಲಾಖಾ ಜಾಲತಾಣ ಕ್ಕೆ https://dce.karnataka.gov.in/ ಸಂಪರ್ಕಿಸಿ.